Working away from home is loss of AGE.
ಹುಟ್ಟಿದ ಊರನ್ನು ಬಿಟ್ಟು ಬೇರೆ ಊರಿಗೆ ಹೋ ಗುವರ ಮನದಾಳದ ಮಾತು.
ಆದರೆ ನಮಗೇ?, ಮನೆಗೊಂದು ಫೋನ್ ಕಾಲ್, ಮನೆಯಲ್ಲಿ ಖುಶಿ ಸುದ್ದಿ ಇದ್ರೆ! ಒಂದು “Congrats “, ದುಖಃ ಸುದ್ದಿ ಇದ್ರೆ! ಕಣ್ಣಲ್ಲಿ ಕಣ್ಣೀರು ಮತ್ತೆ ಮಾತಲ್ಲಿ ಮೌನ. ಸುಖಕ್ಕು, ದುಖಕ್ಕು ಬೇಕಾಗಿರೋ ಒಂದು ಪ್ರೀತಿಯ ಅಪ್ಪುಗೇಯ ಅದ್ರಷ್ಟ ನಮಗೆಲ್ಲಿದೆ. ಅಪ್ಪ, ಅಮ್ಮ , ಅಣ್ಣ, ತಂಗಿ ಏಲ್ಲಾ ಮೋಬೈಲ್ ಅಲ್ಲಿ ಅಶ್ಟೆ.
ಒಂದಂತು ನಿಜ, ಮನೆಯಲ್ಲಿದ್ರೆ ಕಷ್ಟನೋ ಸುಖನೋ! ನಾನು ನನ್ನವರು ಅಂತ ಯಾವಾಗಲೂ ಜೊತೆಗಿರುತ್ತಾರೆ.
ಹಾಗೇ ಇಲ್ಲಿ ಯು ತುಂಬ ಗೆಳೆಯರು, ಬೇಕಾದವರು ಇದಾರೆ! ಆದ್ರೆ ಇದ್ರಲ್ಲಿತುಂಬ ಜನ Time Being ಅಷ್ಟೆ. ಇಲ್ಲಿ ಒಂದೋಂದು ತಪ್ಪಿಗೂ ಒಬ್ಬೊಬ್ರು ದೂರ ಆಗ್ತಾರೆ. ತಪ್ಪು ತಿದ್ದಿಕೊಳ್ಳುವ ಅವಕಾಶವು ಕೊಡಲ್ಲ.
ಇಲ್ಲಿ ಯಾರೂ ಶಾಶ್ವತ ಇಲ್ಲ.
ಇಷ್ಟು ದಿನ ಆದ್ರೂ ಅರ್ಥ ಆಗದೇ ಇರೋದು ಒಂದು ವಿಷಯ!! “ಅಪರಿಚಿತ ಊರಿಗೆ ಬಂದು, ಬೇರೆಯವರನ್ನು ನನ್ನವರು ಅಂತ ಅನ್ಕೊಂಡು, ನನ್ನವರಿಂದ ಇಷ್ಟು ದೂರ ಇದ್ದು, ನನ್ನವರು ನೆನಪಿಸಿಕೊಂಡು , ಇಲ್ಲಿ ಇರುವ ಅವಶ್ಯಕತೆ ಅದೆಯಾ???”
ಇಷ್ಟೆಲ್ಲಾ ಯೋಚ್ಸಿದಮೇಲೆ ನೆನಪಾಯಿತು, ತುಂಬಾ Late ಆಯ್ತು ಮಲಗೋಕೆ, ನಾಳೆ ಕೆಲಸಕ್ಕೆ ಬೆರೆ ಹೋಗ್ಬೆಕು. ಇಲ್ಲಾ ಅಂದ್ರೆ ಇರೋ ಅನ್ನಕ್ಕು ಕಲ್ಲಬೀಳುತ್ತೆ ಅಂತ ಮೋಬೈಲ್ ಅಲ್ಲಿ ಅಲಾರ್ಮ ಆನ್ ಮಾಡಿ ಮಲ್ಗತಿನಿ.
ಏಲ್ಲ ಇದೆ, ಆದರೆ ಏನು ಇಲ್ಲಾ ಅನ್ನೊ ಮನಸ್ಥಿಥಿ!!!
ಎಲ್ಲಾರ್ ಜೀವನ ಇಷ್ಟೇ, ಇದೇ ಜೀವನ!
ಅಂದಹಾಗೆ, “ನಾನು ಇನ್ಯಾರ್ದೋ ಕನಸಿನ ಜೀವನ ಜೀವಿಸುತ್ತಿದ್ದೇನೆ” ಅಂತ ಮನಸಿಗೆ ಸಾಂತ್ವನ ಹೇಳ್ಕೊಂಡು ಮೌನವಾಗ್ತಿನಿ.
ಅರುಣಕುಮಾರ ಸಾಗರ
ಹೃದಯ ಸಂಬಂಧಿ ನೋವುಗಳು ಬರುತ್ತವೆ and ಹೋಗುತ್ತದೆ
ReplyDelete